ವಿಜ್ಞಾನ ಲೋಕ

Contributed by: Shrividya Rao|Vijaya Karnataka•
special tourism references on coolcation chantress and lanternfly
‘ಇಟಟ್ಝ್ಚaಠಿಜಿಟ್ಞ’ (ಕೂಲ್ ಕೇಷನ್ )

ಪ್ರಸ್ತುತ ಜಾಗತಿಕವಾಗಿ ಹೆಚ್ಚು ಚಾಲ್ತಿಯಲ್ಲಿರುವ ಪ್ರವಾಸೋದ್ಯಮದ ಪದವಾಗಿದೆ. ಇದು ‘ಇಟಟ್ಝ’ (ತಂಪಾದ) ಮತ್ತು ‘್ಖa್ಚaಠಿಜಿಟ್ಞ’ (ರಜೆ/ಪ್ರವಾಸ) ಎಂಬ ಎರಡು ಇಂಗ್ಲಿಷ್ ಪದಗಳ ಒಟ್ಟುಗೂಡಿಕೆಯಿಂದ ರೂಪುಗೊಂಡ ಹೊಸ ಪದವಾಗಿದೆ. ತೀವ್ರ ಬಿಸಿಲು, ಉಷ್ಣಾಂಶ ಏರಿಕೆ ಮತ್ತು ಕಾಡ್ಗಿಚ್ಚಿನಿಂದ ಕೂಡಿದ ಸಾಂಪ್ರದಾಯಿಕ ಹಾಗೂ ಹೆಚ್ಚು ಉಷ್ಣತೆಯುಳ್ಳ ಪ್ರವಾಸಿ ತಾಣಗಳನ್ನು ತಪ್ಪಿಸಿ, ಹಿತಕರವಾದ ತಂಪಾದ ಹವಾಮಾನವಿರುವ ಸ್ಥಳಗಳಿಗೆ ಪ್ರವಾಸ ಹೋಗುವ ಹೊಸ ಟ್ರೆಂಡ್ ಗೆ ಕೂಲ್ ಕೇಷನ್ ಎನ್ನಲಾಗುತ್ತದೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಕಾರಣ ಪ್ರವಾಸಿಗರು ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆದು ನೆಮ್ಮದಿಯಿಂದ ವಿಶ್ರಾಂತಿ ಪಡೆಯಲು ತಂಪಾದ ವಾತಾವರಣವಿರುವ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಫೈಲ್ ನೇಮ್ - ಕೂಲ್ ಕೇಷನ್

--------------

ಚಾಂಟ್ರೆಸ್ (ಇha್ಞಠ್ಟಿಛಿss)

ಪ್ರಾಚೀನ ಈಜಿ±್ಟ… ಇತಿಹಾಸದಲ್ಲಿಚಾಂಟ್ರೆಸ್ ಎಂದರೆ ದೇವಾಲಯಗಳಲ್ಲಿಧಾರ್ಮಿಕ ಸ್ತುತಿಗೀತೆಗಳನ್ನು ಹಾಡುವ ಮತ್ತು ದೇವತೆಗಳನ್ನು ಪೂಜಿಸುವ ಉನ್ನತ ಸ್ಥಾನದ ಮಹಿಳಾ ಪೂಜಾರಿ ಅಥವಾ ಗಾಯಕಿ. ಇವರು ದೇವಸ್ಥಾನದ ಧಾರ್ಮಿಕ ವಿಧಿ-ವಿಧಾನಗಳಲ್ಲಿಪ್ರಮುಖ ಪಾತ್ರ ವಹಿಸುತ್ತಿದ್ದರು. ಪ್ರಾಚೀನ ಈಜಿ±್ಟ… ಭಾಷೆಯಲ್ಲಿಇವರನ್ನು ಹೆಸೆತ್ ಅಥವಾ ಶೆಮಾಯೆತ್ ಎಂದು ಕರೆಯಲಾಗುತ್ತಿತ್ತು. ಚಾಂಟ್ರೆಸ್ ಹುದ್ದೆಯು ಅತ್ಯಂತ ಪ್ರತಿಷ್ಠಿತವಾಗಿತ್ತು. ಸಾಮಾನ್ಯ ಮಹಿಳೆಯರಿಗೆ ಈ ಅವಕಾಶವಿರಲಿಲ್ಲ. ರಾಜಮನೆತನದವರು, ಪ್ರಧಾನ ಮಂತ್ರಿಗಳು, ಹಿರಿಯ ಅಧಿಕಾರಿಗಳ ಹೆಂಡತಿಯರು ಅಥವಾ ಹೆಣ್ಣುಮಕ್ಕಳು ಈ ಸ್ಥಾನವನ್ನು ಅಲಂಕರಿಸುತ್ತಿದ್ದರು. ಇವರಿಗೆ ದೇವಾಲಯದ ಭೂಮಿ ಮತ್ತು ಆಸ್ತಿಗಳಿಂದ ಬರುವ ಆದಾಯದಿಂದ ವೇತನ ಅಥವಾ ಆರ್ಥಿಕ ಭದ್ರತೆ ಸಿಗುತ್ತಿತ್ತು. ಇವರು ಸಮಾಜದಲ್ಲಿಬಹಳ ಸ್ವತಂತ್ರರಾಗಿದ್ದು, ಉನ್ನತ ಗೌರವವನ್ನು ಹೊಂದಿದ್ದರು.

ಫೈಲ್ ನೇಮ್ - ಚಾಂಟ್ರೆಸ್

--------------

ಲ್ಯಾಂಟರ್ನ್ ಫ್ಲೈಸ್ (ಔa್ಞಠಿಛ್ಟ್ಞಿ್ಛ್ಝಜಿಛಿs)

ಪ್ರಕೃತಿಯ ಅತ್ಯಂತ ಆಕರ್ಷಕ ಕೀಟಗಳಲ್ಲಿಒಂದಾಗಿವೆ. ಹೆಸರಿನಲ್ಲಿಫ್ಲೈ ಎಂದಿದ್ದರೂ, ಇವು ನೊಣಗಳಲ್ಲ. ಪ್ಲಾಂಥೋಪರ್ಸ್ ಕುಟುಂಬಕ್ಕೆ ಸೇರಿದ ಈ ಕೀಟಗಳು ಮಿಡತೆಗಳಿಗೆ ಹತ್ತಿರದ ಸಂಬಂಧಿಗಳು. ಈ ಕೀಟಗಳ ಮುಂಭಾಗದ ರೆಕ್ಕೆಗಳು ಮರದ ತೊಗಟೆಯಂತೆ ಮರೆಮಾಚುವ ಬಣ್ಣದಲ್ಲಿದ್ದರೆ, ಹಿಂಭಾಗದ ರೆಕ್ಕೆಗಳು ಗಾಢವಾದ ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳ ಆಕರ್ಷಕ ವಿನ್ಯಾಸವನ್ನು ಹೊಂದಿರುತ್ತವೆ. ಬೇರೆ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಈ ಬಣ್ಣಗಳು ಸಹಾಯ ಮಾಡುತ್ತದೆ. ಟ್ರೀ ಆಫ್ ಹೆವೆನ್ ಎಂಬ ಮರಗಳು ಇವಕ್ಕೆ ಅತಿ ಹೆಚ್ಚು ಇಷ್ಟವಾದ ಆವಾಸಸ್ಥಾನ. ಮೂಲತಃ ಏಷ್ಯಾ ಖಂಡಕ್ಕೆ ಸೇರಿದ ಇವು, ಜಾಗತಿಕ ವ್ಯಾಪಾರ ಮತ್ತು ಸಾಗಾಣಿಕೆಯ ಮೂಲಕ ಅಮೆರಿಕ ಮತ್ತು ಯೂರೋಪ್ ದೇಶಗಳಿಗೂ ಹರಡಿವೆ. ಇವು ದ್ರಾಕ್ಷಿ ತೋಟಗಳು, ಹಣ್ಣಿನ ಮರಗಳು ಮತ್ತು ಕಾಡುಗಳಿಗೆ ಭಾರೀ ಹಾನಿಯನ್ನುಂಟುಮಾಡುವುದರಿಂದ ಇವುಗಳನ್ನು ಕೃಷಿ ವಲಯದಲ್ಲಿಅಪಾಯಕಾರಿ ಕೀಟ ಎಂದು ಪರಿಗಣಿಸಲಾಗಿದೆ.

ಫೈಲ್ ನೇಮ್ - ಲ್ಯಾಂಟರ್ನ್ ಫ್ಲೈಸ್

------------------------