ಇಂಟ್ರೋಪುಟ್ಟ ಮಗುವನ್ನು ಪ್ರವಾಸ ಕರೆದುಕೊಂಡು ಹೋದರೆ ಅದಕ್ಕೆ ನೆನಪಿರುತ್ತದೋ ಇಲ್ಲವೋ, ಆದರೆ ಅ ಪುಟಾಣಿ ಜತೆ ಸುತ್ತಾಡಿದ ನೆನಪುಗಳು ನಮ್ಮ ಬದುಕಿನಲ್ಲಿಉಳಿಯುತ್ತವೆ ಎನ್ನುವುದು ನಟ ವಸಿಷ್ಠ ಸಿಂಹ ಮಾತು.
--
ಮಲ್ವೀರ
--
ಮದುವೆಗೂ ಮುನ್ನ ಹಾಗೂ ಮದುವೆಯಾದ ಹುರುಪಿನಲ್ಲಿಪ್ರವಾಸವೆಂದು ಊರು ಸುತ್ತಲು ಇರುವ ಸಮಯ, ಆಸಕ್ತಿ ಮಗುವಾದ ಮೇಲೂ ಇರಬೇಕೆನ್ನುವ ನಟ ವಸಿಷ್ಠ ಸಿಂಹ, ತಮ್ಮ ಪತ್ನಿ, ನಟಿ ಹರಿಪ್ರಿಯಾ ಹಾಗೂ ಮಗನ ಜತೆ ಮೇಘಾಲಯ ಸುತ್ತಿ ಬಂದಿದ್ದಾರೆ. ದೆಹಲಿಯಲ್ಲಿಕೆಲಸವೊಂದರ ಸಲುವಾಗಿ ಹೋಗಿದ್ದಾಗ ಹಾಗೆಯೇ ಶಿಲ್ಲಾಂಗ್ ಹಾಗೂ ಮೇಘಾಲಯಕ್ಕೂ ಭೇಟಿ ನೀಡಿದ್ದಾರೆ. ಎಂಟು ದಿನಗಳ ಕಾಲ ಮಾಡಿದ ಪುಟಾಣಿ ಮಗನೊಂದಿಗೆ ಮಾಡಿದ ಈ ಸುದೀರ್ಘ ಪ್ರವಾಸ ಹೊಸದೇ ಅನುಭವ ನೀಡಿತು ಎನ್ನುತ್ತಾರೆ ವಸಿಷ್ಠ.
ಮೇಘಾಲಯಕ್ಕೆ ಪ್ರವಾಸ ಮಾಡಿ ಬಂದ ಬಗ್ಗೆ ಮಾತನಾಡಿರುವ ವಸಿಷ್ಠ, ‘ನನಗೆ ಸಿನಿಮಾ ಕೆಲಸಗಳು ಹಾಗೂ ಶೂಟಿಂಗ್ ಒತ್ತಡದಲ್ಲಿಫ್ಯಾಮಿಲಿ ಜತೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಹರಿಪ್ರಿಯಾ ಕೂಡ ಮಗನ ಲಾಲನೆ ಪಾಲನೆಯಲ್ಲಿಹೊರಗೆ ಸುತ್ತಾಡಲು ಸಾಧ್ಯವಾಗಿರಲಿಲ್ಲ. ನಾವಿಬ್ಬರು ಮೊದಲಿನಿಂದಲೂ ಪ್ರವಾಸಪ್ರಿಯರು. ಇಂಥದ್ದೇ ಜಾಗ ಎಂದು ಫಿಕ್ಸ್ ಮಾಡಿಕೊಳ್ಳುತ್ತಿರಲಿಲ್ಲ. ಸುಮ್ಮನೆ ಸುತ್ತಾಡಿ ಬರಬೇಕು ಎನ್ನುವುದು ಇಬ್ಬರಿಗೂ ಇಷ್ಟ. ಮಗುವಾದ ಮೇಲೆ ಹೀಗೆ ಸುತ್ತಾಡಲು ಸಾಧ್ಯವಾಗಿರಲಿಲ್ಲ, ಅದು ಅಷ್ಟು ಸುಲಭವೂ ಅಲ್ಲ. ಇದಕ್ಕೆ ಸ್ವಲ್ಪ ಪೂರ್ವ ತಯಾರಿ ಅವಶ್ಯಕತೆ ಇದೆ. ಮಗ ಇನ್ನೂ ನಮ್ಮನ್ನು ಅದರಲ್ಲೂಹರಿಪ್ರಿಯ ಅವರ ಮೇಲೆ ಅವಲಂಬಿಸಿರುವ ಕಾರಣ, ತಯಾರಿ ಅಗತ್ಯ. ನಾನು ಹೆಚ್ಚಾಗಿ ಉತ್ತರ ಭಾರತ ಪ್ರವಾಸ ಮಾಡಿಲ್ಲ. ಹಾಗಾಗಿ ಈ ಬಾರಿ ಮೇಘಾಲಯ ಪ್ರವಾಸ ಅನಿರೀಕ್ಷಿತವಾಗಿ ಮಾಡಿದೆವು, ಹಚ್ಚ ಹಸರಿನ ಪ್ರದೇಶ ಮನಸ್ಸಿಗೆ ಮುದ ನೀಡಿತು. ಮಗ ಕೂಡ ಎಂಜಾಯ್ ಮಾಡುತ್ತಿದ್ದ. ಹೀಗಾಗಿ ಹೆಚ್ಚು ಕಿರಿಕಿರಿ ಮಾಡಲಿಲ್ಲ. ಅವನದೇ ಲೋಕದಲ್ಲಿಖುಷಿಪಡುತ್ತಿದ್ದ. ಮಕ್ಕಳಿಗೆ ಆ ವಯಸ್ಸಿನಲ್ಲಿಸುತ್ತಾಡಿದ್ದು ನೆನಪಿನಲ್ಲಿಉಳಿಯುವುದಿಲ್ಲಎಂದುಕೊಳ್ಳಲಾಗದು. ಅವರ ನೆನಪಲ್ಲಿಅದು ಇರುತ್ತದೆ. ಪೋಷಕರಾದ ನಮಗಂತೂ ಇದು ಲೈಫಿನ ಬೆಸ್ಟ್ ಮೆಮೊರಿಗಳಲ್ಲಿಒಂದಾಗಿರುತ್ತೆ. ಅದಕ್ಕಾಗಿಯಾದರೂ ಟ್ರಾವೆಲ್ ಮಾಡಬೇಕು. ಅವನು ಇನ್ನು ಸ್ವಲ್ಪ ದೊಡ್ಡವನಾದ ಮೇಲೆ, ನಮ್ಮ ಮೇಲಿನ ಅವಲಂಬನೆ ಕಡಿಮೆಯಾದ ಮೇಲೆ ಇನ್ನಷ್ಟು ಸುತ್ತಾಡುವ ಪ್ಲಾನ್ ಇದೆ’
‘ದೆಹಲಿಯಿಂದ ಶಿಲ್ಲಾಂಗ್ ಹಾಗೂ ಮೇಘಾಲಯಕ್ಕೆ ಭೇಟಿ ನೀಡಿದ್ದೆವು. ನಾವು ವೆಬ್ ನಲ್ಲಿನೋಡಿ ಏನೇ ಪ್ಲಾನ್ ಮಾಡಿಕೊಂಡರೂ ಅಲ್ಲಿಹೋದ ಮೇಲೆ, ಅಲ್ಲಿನ ಲೋಕಲ್ ಜನರ ಅನುಭವದಿಂದ ಇನ್ನಷ್ಟು ಜಾಗಗಳನ್ನು ಎಕ್ಸ್ ಪ್ಲೋರ್ ಮಾಡಲು ಸಿಗುತ್ತದೆ. ನಮ್ಮಿಬ್ಬರಿಗೆ ಹೋದಲ್ಲೆಲ್ಲಾಫೋಟೋ ತೆಗೆದುಕೊಳ್ಳುವ ಮನಸ್ಸಾಗುವುದಿಲ್ಲ. ಬದಲಾಗಿ ಆ ಕ್ಷಣವನ್ನು ಮನಸ್ಫೂರ್ತಿಯಾಗಿ ಎಂಜಾಯ್ ಮಾಡಬೇಕು, ಅದನ್ನು ನೆನಪಲ್ಲಿಉಳಿಸಿಕೊಳ್ಳುವ ಹಂಬಲ. ನನಗೆ ಬೆಟ್ಟ, ಹಸಿರು ಪ್ರದೇಶ, ಗುಡ್ಡಗಾಡು ಇಷ್ಟವಾದರೆ, ಹರಿಪ್ರಿಯಾಗೆ ಬೀಚ್ , ಸಿಟಿಗಳು ಇಷ್ಟವಾಗುತ್ತವೆ. ಆದರೆ ಲೊಕೇಷನ್ ಯಾವುದೇ ಆದರೂ ಇಬ್ಬರೂ ಒಟ್ಟಿಗೆ ಸುತ್ತಬೇಕು ಎನ್ನುವುದಷ್ಟೆ ನಮ್ಮ ಮೊದಲ ಆದ್ಯತೆ’ ಎಂದಿದ್ದಾರೆ ವಸಿಷ್ಠ.