ಆಸ್ತಿ ಹೂಡಿಕೆಗೆ ಪ್ರಶಸ್ತ ತಾಣ ದೇವನಹಳ್ಳಿ

Contributed by: babitha.salian@timesgroup.com|Vijaya Karnataka•
devanahalli a great location for easy investment
ಆಸ್ತಿ ಹೂಡಿಕೆಗೆ ಪ್ರಶಸ್ತ ತಾಣ ದೇವನಹಳ್ಳಿ

-ಉತ್ತರ ಬೆಂಗಳೂರಿನ ರಿಯಲ್ ಎಸ್ಟೇಟ್ ಹಬ್
ಇಂಟ್ರೊ

ಬೆಂಗಳೂರು ನಗರವೀಗ ಉತ್ತರದತ್ತ ವಿಸ್ತರಿಸುತ್ತಿದ್ದು, ಈ ಬೆಳವಣಿಗೆಯ ಪ್ರಮುಖ ರಿಯಾಲ್ಟಿ ಕೇಂದ್ರವಾಗಿ ದೇವನಹಳ್ಳಿ ಗುರುತಿಸಿಕೊಂಡಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಹತ್ತಿರದಲ್ಲಿರುವ ವಸತಿ ಯೋಜನೆಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ರೆಸಾರ್ಟ್ ಗಳು, ಪ್ರತಿಷ್ಠಿತ ಶಾಲಾ ಕಾಲೇಜುಗಳು, ಮನರಂಜನಾ ತಾಣ, ಕ್ರೀಡಾ ಅಕಾಡೆಮಿ ಮತ್ತು ಮುಂಬರುವ ಟೆಕ್ ಪಾರ್ಕ್ಸ್ ಗೆ ಹತ್ತಿರವಿದ್ದು ಖರೀದಿದಾರರಿಗೆ ಅತ್ಯಂತ ಅನುಕೂಲವಾಗಿವೆ.

ಬಬಿತಾ ಎಸ್ .

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವಾಗಿದ್ದ ದೇವನಹಳ್ಳಿ ಈಗ ವಸತಿ, ವಾಣಿಜ್ಯ, ಕೈಗಾರಿಕಾ, ಲಾಜಿಸ್ಟಿಕ್ಸ್ ಅಭಿವೃದ್ಧಿಗಳಿಂದಾಗಿ ಸಾಕಷ್ಟು ಬದಲಾಗಿದೆ. 2026ರ ರಿಯಾಲ್ಟಿ ಮಾರುಕಟ್ಟೆ ವರದಿಗಳ ಪ್ರಕಾರ, ವಿಮಾನ ನಿಲ್ದಾಣದ ವಿಸ್ತರಣೆ, ಹೊಸ ಮೂಲಸೌಕರ್ಯ ಯೋಜನೆಗಳು ಮತ್ತು ಉದ್ಯೋಗ ಸೃಷ್ಟಿ ಈ ಪ್ರದೇಶದ ರಿಯಲ್ ಎಸ್ಟೇಟ್ ಬೇಡಿಕೆಗೆ ಪ್ರಮುಖ ಕಾರಣಗಳಾಗಿವೆ. ಇಲ್ಲಿನ ಚನ್ನಹಳ್ಳಿ, ಕಾರ್ಗೊ ರಸ್ತೆ ಇತ್ಯಾದಿಗೆ ಸಮೀಪವಿರುವ ಲಕ್ಷುರಿ ವಸತಿ ಯೋಜನೆಗಳು ಜನರ ಹೈಎಂಡ್ ಲೈಫ್ ಸ್ಟೈಲ್ ಗಳಿಗೆ ಹೇಳಿ ಮಾಡಿಸಿದಂತಿವೆ.

ಬೆಲೆ ಏರಿಕೆಯ ಟ್ರೆಂಡ್

ದೇವನಹಳ್ಳಿಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿಕಳೆದ ಕೆಲವು ವರ್ಷಗಳಿಂದ ಗಮನಾರ್ಹ ಬೆಲೆ ಏರಿಕೆ ಕಂಡುಬಂದಿದೆ. ಇಲ್ಲಿಅಪಾರ್ಟ್ ಮೆಂಟ್ ಗಳ ಬೆಲೆ ಸಾಮಾನ್ಯವಾಗಿ ಪ್ರತಿ ಚದರ ಅಡಿಗೆ ಸುಮಾರು 8,500ರಿಂದ 13,000 ರೂ.ರಷ್ಟಿದ್ದು, ವಸತಿ ಯೋಜನೆ ಮತ್ತು ಸ್ಥಳದ ಆಧಾರದ ಮೇಲೆ ದರದಲ್ಲಿಸಾಕಷ್ಟು ವ್ಯತ್ಯಾಸವಿದೆ. ಅಭಿವೃದ್ಧಿಪಡಿಸಿದ ಅಥವಾ ಅನುಮೋದಿತ ಪ್ಲಾಟ್ ಗಳ ದರಗಳು ಕೂಡ ಸ್ಥಳಾನುಸಾರವಾಗಿ ಬದಲಾಗುತ್ತವೆ. ಅಂದರೆ ದೇವನಹಳ್ಳಿ ಇನ್ನೂ ಕಡಿಮೆ ಬೆಲೆಯ ಆರಂಭಿಕ ಮಾರುಕಟ್ಟೆ ಮಾತ್ರವಲ್ಲ, ಈಗಾಗಲೇ ಸಾಕಷ್ಟು ಬೆಲೆ ಏರಿಕೆ ಕಂಡಿರುವ ಬೆಳವಣಿಗೆಯ ಅಭಿವೃದ್ಧಿ ಮಾರುಕಟ್ಟೆಯಾಗಿದೆ. ಆದ್ದರಿಂದ ಹೊಸ ಹೂಡಿಕೆದಾರರಿಗೆ ಇದು ಲಾಭದಾಯಕವಾಗಿ ಪರಿಣಮಿಸಿದೆ.

ವಿಮಾನ ನಿಲ್ದಾಣ ಸಮೀಪ

ದೇವನಹಳ್ಳಿಯ ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆಯಲ್ಲಿಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಮುಖ ಪಾತ್ರ ವಹಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆ ವಿಮಾನ ನಿಲ್ದಾಣದ ಸುತ್ತಮುತ್ತ ಹೋಟೆಲ್ , ಕಚೇರಿ, ಗೋದಾಮು, ಲಾಜಿಸ್ಟಿಕ್ಸ್ ಮತ್ತು ವಸತಿ ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ವಿಮಾನ ನಿಲ್ದಾಣದ ಸಮೀಪದ ಪ್ರದೇಶಗಳಲ್ಲಿಭೂಮಿಯ ಮೌಲ್ಯ ಹೆಚ್ಚುತ್ತಿದ್ದು, ದೀರ್ಘಾವಧಿಯ ಆಸ್ತಿ ಹೂಡಿಕೆದಾರರಿಗೆ ಈ ಪ್ರದೇಶ ಪ್ರಮುಖ ಆಕರ್ಷಣೆಯಾಗಿದೆ.

ಮೆಟ್ರೊ ಮತ್ತು ಸಾರಿಗೆ ಸಂಪರ್ಕ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೊ ನೀಲಿ ಮಾರ್ಗ ದೇವನಹಳ್ಳಿ ಮತ್ತು ಉತ್ತರ ಬೆಂಗಳೂರಿನ ಭವಿಷ್ಯದ ಸಂಪರ್ಕವನ್ನು ಬಲಪಡಿಸುವ ಪ್ರಮುಖ ಯೋಜನೆಯಾಗಿದೆ. ವಿಮಾನ ನಿಲ್ದಾಣದ ಮೆಟ್ರೊ ಸಂಪರ್ಕವು 2027ರ ವೇಳೆಗೆ ಕಾರ್ಯಾರಂಭ ಮಾಡುವ ಗುರಿಯಲ್ಲಿದೆ. ಇದರ ಜೊತೆಗೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮತ್ತು ಇತರ ರಸ್ತೆ ಮೂಲಸೌಕರ್ಯಗಳು ಉತ್ತರ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕಿಸುವ ಸಾಮರ್ಥ್ಯ ಹೊಂದಿವೆ. ಇಲ್ಲಿನ ಉತ್ತಮ ರಸ್ತೆ ಮತ್ತು ರೈಲು ಸಂಪರ್ಕವು ಮುಂದಿನ ದಿನಗಳಲ್ಲಿಪ್ರಯಾಣದ ಸಮಯ ಕಡಿಮೆ ಮಾಡಲು ಮತ್ತು ಉದ್ಯೋಗ ಕೇಂದ್ರಗಳೊಂದಿಗೆ ಸಂಪರ್ಕ ಸುಧಾರಿಸಲು ನೆರವಾಗಲಿದೆ ಎನ್ನಲಾಗುತ್ತಿದೆ.

ಕೈಗಾರಿಕೆ ಮತ್ತು ಉದ್ಯೋಗ

ದೇವನಹಳ್ಳಿಯಲ್ಲಿಏರೋಸ್ಪೇಸ್ , ಎಲೆಕ್ಟ್ರಾನಿಕ್ಸ್ , ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಹೂಡಿಕೆಗಳು ಈ ಪ್ರದೇಶದ ಆರ್ಥಿಕತೆಯನ್ನು ಗಮನಾರ್ಹವಾಗಿ ಬದಲಾಯಿಸುತ್ತಿವೆ. ವಿಶೇಷವಾಗಿ ಬೃಹತ್ ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಯೋಜನೆಗಳಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಈ ಪರಿಣಾಮ ಬಾಡಿಗೆ ಮನೆ, ಅಪಾರ್ಟ್ ಮೆಂಟ್ , ವಿಲ್ಲಾ ಮತ್ತು ವಾಣಿಜ್ಯ ಆಸ್ತಿಗಳಿಗೆ ಭವಿಷ್ಯದಲ್ಲಿಬೇಡಿಕೆ ಹೆಚ್ಚಾಗಬಹುದು. ಈ ಭಾಗದಲ್ಲಿದೀರ್ಘಾವಧಿಯ ಭೂಮಿ ಹೂಡಿಕೆ ಬಯಸುವವರಿಗೆ ಪ್ಲಾಟೆಡ್ ಡೆವಲಪ್ ಮೆಂಟ್ ಯೋಜನೆಗಳು ಆಕರ್ಷಕವಾಗಿವೆ. ಸ್ವಂತ ವಾಸ ಅಥವಾ ಭವಿಷ್ಯದ ಬಾಡಿಗೆ ಆದಾಯ ಬಯಸುವವರಿಗೆ ಅಪಾರ್ಟ್ ಮೆಂಟ್ ಗಳು ಸೂಕ್ತವಾಗಿವೆ. ಹೆಚ್ಚಿನ ಬಜೆಟ್ ಹೊಂದಿರುವ ಕುಟುಂಬಗಳು ಮತ್ತು ದೀರ್ಘಾವಧಿಯ ಹೂಡಿಕೆದಾರರಿಗೆ ವಿಲ್ಲಾ ಮತ್ತು ಟೌನ್ ಶಿಪ್ ಯೋಜನೆಗಳು ಉತ್ತಮವಾಗಿವೆ.

ಬಾಕ್ಸ್

ಭವಿಷ್ಯದ ರಿಯಾಲ್ಟಿ ಹೂಡಿಕೆಗೆ ಉತ್ತಮ

ದೇವನಹಳ್ಳಿಯ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೂಲಭೂತ ಅಂಶಗಳು ಬಲವಾಗಿವೆ. ಮುಖ್ಯವಾಗಿ ವಿಮಾನ ನಿಲ್ದಾಣ, ರಸ್ತೆ ಸಂಪರ್ಕ, ಮೆಟ್ರೊ ಯೋಜನೆ, ಕೈಗಾರಿಕಾ ಹೂಡಿಕೆಗಳು ಮತ್ತು ಹೊಸ ಉದ್ಯೋಗ ಕೇಂದ್ರಗಳಿಂದಾಗಿ ಮುಂದಿನ ಹಲವು ವರ್ಷಗಳಲ್ಲೂಉತ್ತರ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಕಾರಿಡಾರ್ ಗಳಲ್ಲಿದೇವನಹಳ್ಳಿ ಮುಂಚೂಣಿಯಲ್ಲಿರಲಿದೆ.

ಬಾಕ್ಸ್

ಹೈಲೈಟ್ಸ್

-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪ

-ಮುಂಬರುವ ಮೆಟ್ರೊ ನಿಲ್ದಾಣಕ್ಕೆ ಹತ್ತಿರ

-ಐಟಿ/ಬಿಟಿ ಪಾರ್ಕ್ನಿಂದ ಕೇವಲ 5 ನಿಮಿಷಗಳ ಪ್ರಯಾಣ

-ಪ್ರಮುಖ ಹೆದ್ದಾರಿಗಳಿಗೆ ಉತ್ತಮ ಸಂಪರ್ಕ

-ಕೈಗಾರಿಕಾ ಪ್ರದೇಶದಿಂದ 1 ಕಿ.ಮೀ ದೂರ

-ರೈಲ್ವೆ ನಿಲ್ದಾಣಕ್ಕೆ ಸಮೀಪ