ದುಬೈ: ಮಧ್ಯಪ್ರಾಚ್ಯದ ಏಕೈಕ ಯಕ್ಷಗಾನ ಸಂಸ್ಥೆಯಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ 2026-2027ನೇ ಸಾಲಿನ ನೂತನ ತರಗತಿಗಳ ಉದ್ಘಾಟನಾ ಸಮಾರಂಭ ಮತ್ತು ಗುರು ಪೂಜೆ , ಗುರು ವಂದನಾ ಕಾರ್ಯಕ್ರಮ ನಗರದ ಫಾರ್ಚೂನ್ ಕ್ಲಾಸಿಕ್ ನಲ್ಲಿನಡೆಯಿತು. ಬೆಳಗ್ಗೆ ಕೇಂದ್ರದ ಸದಸ್ಯರಿಂದ ಭಜನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಸಂತೋಷ್ ಭಟ್ ಎರ್ಮಾಳ್ ಪೌರೋಹಿತ್ಯದಲ್ಲಿಪೂಜೆ ನಡೆಯಿತು. ಬಳಿಕ ಕೇಂದ್ರದ ಹಿರಿಯ ಸದಸ್ಯರು ಮತ್ತು ಗುರುಗಳು ದೀಪ ಬೆಳಗಿಸುವ ಮೂಲಕ 2026-2027ನೇ ಸಾಲಿನ ನೂತನ ತರಗತಿಗೆ ಚಾಲನೆ ನೀಡಲಾಯಿತು.
ಬಳಿಕ ಕೇಂದ್ರದ ಮುಖ್ಯ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ , ನೃತ್ಯ ಗುರುಗಳಾದ ಶರತ್ ಕುಡ್ಲಮತ್ತು ಚೆಂಡೆ ಮದ್ದಳೆ ಗುರುಗಳಾದ ಸವಿನಯ ನೆಲ್ಲಿತೀರ್ಥರವರಿಗೆ ಶಿಷ್ಯ ವೃಂದದವರು ಗುರುವಂದನೆ ಸಲ್ಲಿಸಿದರು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಶೇಖರ್ ಡಿ. ಶೆಟ್ಟಿಗಾರ್ , ನಮ್ಮ ಸನಾತನ ಪರಂಪರೆಯಲ್ಲಿವಿದ್ಯೆಗೆ ಹೆಚ್ಚಿನ ಮಹತ್ವವಿದೆ, ಜ್ಞಾನಾರ್ಜನೆಯೇ ನಮ್ಮ ಪರಮ ಗುರಿಯಾಗಿರಬೇಕು. ಜ್ಞಾನಾರ್ಜನೆಗಾಗಿ ಸಿಕ್ಕಿದ ಅವಕಾಶಗಳನ್ನು ಕೈಚೆಲ್ಲಬಾರದು, ನಮ್ಮ ಸತ್ಕಾರ್ಯಗಳೆಲ್ಲವೂ ಭಗವದರ್ಪಣದ ಸಮರ್ಪಣಾ ಭಾವದಿಂದ ಮುನ್ನಡೆಯಲಿ ಎಂದು ಹಾರೈಸಿದರು. ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ವಂದಿಸಿದರು. ಮಧ್ಯಾಹ್ನ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.7ಎಂಜೆದುಬೈಯಕ್ಷಗಾನ