ಎನ್ನೆಸ್ಸೆಸ್ ದಿನಾಚರಣೆ: ಪುನರ್ವಸತಿ ಕೇಂದ್ರಗಳಲ್ಲಿ ಆರೋಗ್ಯಕರ ಜೀವನಶೈಲಿ ಮಾರ್ಗದರ್ಶನ

Contributed by: prashantha.n17@gmail.com|Vijaya Karnataka•
nss day celebration guidance on healthy living in rehabilitation centers
ವಿಕ ಸುದ್ದಿಲೋಕ ನೆಲ್ಯಾಡಿ

ಉಜಿರೆ ಎಸ್ ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸಸ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಅಂಗವಾಗಿ ಕೊಕ್ಕಡದ ಸೌತಡ್ಕ ಸ್ಪೈನಲ್ ಕಾರ್ಡ್ ರಿಹ್ಯಾಬಿಲಿಟೇಷನ್ ಸೆಂಟರ್ ಹಾಗೂ ಎಂಡೋಸಲ್ಫಾನ್ ರಿಹ್ಯಾಬಿಲಿಟೇಷನ್ ಕೇರ್ ಸೆಂಟರ್ ನಲ್ಲಿವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಸೌತಡ್ಕ ಸ್ಪೈನಲ್ ಕಾರ್ಡ್ ರಿಹ್ಯಾಬಿಲಿಟೇಷನ್ ಸೆಂಟರ್ ನ ಮಾಲೀಕ ವಿನಾಯಕ ರಾವ್ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್ ಡಿಎಂಸಿ ಎನ್ ವೈಎಸ್ ನ ಉದಯಸುಬ್ರಹ್ಮಣ್ಯ ಹಾಗೂ ಡಾ.ಯೋಹಿ ನೇತೃತ್ವದಲ್ಲಿಕೇಂದ್ರಗಳಲ್ಲಿರುವ ರೋಗಿಗಳಿಗೆ ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಮಾಡಿಸಲಾಯಿತು. ಪ್ರಾಣಾಯಾಮ ಹಾಗೂ ಧ್ಯಾನವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು. ಅಲ್ಲದೆ ರೋಗಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸರಳವಾದ ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸಗಳನ್ನು ಪ್ರಾಯೋಗಿಕವಾಗಿ ಮಾಡಿಸಲಾಯಿತು.

ಇದೇ ಸಂದರ್ಭ ರೋಗಿಗಳ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಪೌಷ್ಟಿಕಾಂಶ ಹಾಗೂ ಆಹಾರ ಸೇವನೆಯ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು. ಸಮತೋಲಿತ ಆಹಾರ, ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳ ಮಹತ್ವ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.

ಫೋಟೋ :25ಕೆಎನ್ ಸೆಂಟರ್

(ಪುನರ್ವಸತಿ ಕೇಂದ್ರಗಳಲ್ಲಿಆರೋಗ್ಯಕರ ಜೀವನಶೈಲಿ ಕುರಿತು ಮಾರ್ಗದರ್ಶನ ನೀಡಲಾಯಿತು.)