ಐತಿಚಂಡ ರಮೇಶ್ ಉತ್ತಪ್ಪ ಮೈಸೂರು ್ಟaಞಛಿsh.್ಠಠಿhappaಃಠಿಜಿಞಛಿsಟ್ಛಜ್ಞಿdಜಿa.್ಚಟಞ ವಯಸ್ಸು 36. ಎರಡು ದಶಕಗಳ ಕ್ರೀಡಾ ಬದುಕು. ಒಲಿಂಪಿಕ್ಸ್ , ಏಷ್ಯನ್ ಗೇಮ್ಸ್ , ಕಾಮನ್ ವೆಲ್ತ್ ಕೂಟ ಸೇರಿದಂತೆ ವಿಶ್ವದ ದೊಡ್ಡ ಕ್ರೀಡಾಂಗಣಗಳಲ್ಲಿಭಾರತದ ಜೆರ್ಸಿ ತೊಟ್ಟು ಓಡಿದ ಅನುಭವ. ಆದರೂ ವೇಗ ಕುಂದಿಲ್ಲ, ಪದಕದ ಹಸಿವು ಕಡಿಮೆಯಾಗಿಲ್ಲ. ಕೊಡಗಿನ ಮಣ್ಣಿನ ಮಗಳು ಎಂ.ಆರ್ .ಪೂವಮ್ಮ ಮತ್ತೊಮ್ಮೆ ಏಷ್ಯನ್ ಗೇಮ್ಸ್ ನಲ್ಲಿಭಾರತದ ಚಿನ್ನದ ಓಟಕ್ಕೆ ಬಲ ತುಂಬಿದ್ದಾರೆ. ಜಪಾನ್ ನ ಐಚಿನಗೋಯಾದಲ್ಲಿನಡೆದ ಮಹಿಳೆಯರ 4400 ಮೀಟರ್ ರಿಲೇ ಫೈನಲ್ ನಲ್ಲಿಕಿರಣ್ ಪಹಲ್ , ಎಂ.ಆರ್ .ಪೂವಮ್ಮ, ಪ್ರಾಚಿ ಮತ್ತು ವಿತ್ಯಾ ರಾಮರಾಜ್ ಒಳಗೊಂಡ ಭಾರತ ತಂಡ 3 ನಿಮಿಷ 29.69 ಸೆಕೆಂಡ್ ಗಳಲ್ಲಿಗುರಿ ಮುಟ್ಟಿ ಚಿನ್ನದ ಪದಕ ಗೆದ್ದಿತು. ಬಹರೇನ್ ಬೆಳ್ಳಿ ಹಾಗೂ ಚೀನಾ ಕಂಚಿಗೆ ತೃಪ್ತಿಪಟ್ಟವು. ಭಾರತದ ಅಥ್ಲೆಟಿಕ್ಸ್ ವಿಭಾಗಕ್ಕೆ ಈ ಕೂಟದಲ್ಲಿದೊರೆತ ಮಹತ್ವದ ಚಿನ್ನಗಳಲ್ಲಿಇದೂ ಒಂದು. ಅದರಲ್ಲೂಅನುಭವ ಹಾಗೂ ಯುವಶಕ್ತಿಯ ಮಿಶ್ರಣ ವಾಗಿದ್ದ ಭಾರತೀಯ ತಂಡದಲ್ಲಿ ಪೂವಮ್ಮ ಅವರ ಪಾತ್ರ ಗಮನ ಸೆಳೆಯಿತು. ಕೆಲ ದಿನಗಳ ಹಿಂದಷ್ಟೇ ಮಿಶ್ರ 4400 ಮೀ. ರಿಲೇಯಲ್ಲೂಪೂವಮ್ಮ ಭಾರತಕ್ಕೆ ಬೆಳ್ಳಿ ತಂದುಕೊಟ್ಟಿದ್ದರು. ಈ ಏಷ್ಯನ್ ಗೇಮ್ಸ್ ಪೂವಮ್ಮ ಪಾಲಿಗೆ ಒಂದು ಚಿನ್ನ ಮತ್ತು ಒಂದು ಬೆಳ್ಳಿ ನೀಡಿದೆ. ಕೊಡಗಿನ ಮಣ್ಣಿನಲ್ಲಿಅರಳಿದ ಓಟಗಾರ್ತಿ: ಮಚ್ಚೆಟ್ಟಿರ ರಾಜು ಪೂವಮ್ಮ 1990ರ ಜೂ. 5ರಂದು ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿಜನಿಸಿದರು. ಬಾಲ್ಯ ಮತ್ತು ಶಿಕ್ಷಣದ ಬಹುಭಾಗ ಮಂಗಳೂರಿನಲ್ಲಿಕಳೆದರೂ ಕೊಡಗಿನೊಂದಿಗೆ ಅವರ ನಂಟು ಗಟ್ಟಿಯಾಗಿಯೇ ಉಳಿದಿದೆ. 400 ಮೀಟರ್ ಓಟವೇ ಪೂವಮ್ಮ ಅವರ ಪ್ರಮುಖ ಸ್ಪರ್ಧೆ. 2014ರಲ್ಲಿದಾಖಲಿಸಿದ 51.73 ಸೆಕೆಂಡ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. ಯುವ ಕ್ರೀಡಾಪಟುವಾಗಿದ್ದಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಗಮನ ಸೆಳೆದ ಅವರು, ಬಳಿಕ ಭಾರತೀಯ ಮಹಿಳಾ ರಿಲೇ ತಂಡದ ಅವಿಭಾಜ್ಯ ಅಂಗವಾದರು. 2014ರ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿಮಹಿಳೆಯರ 4400 ಮೀ. ರಿಲೇಯಲ್ಲಿಚಿನ್ನದ ಪದಕ ಗೆದ್ದಿದ್ದ ಪೂವಮ್ಮ, ವೈಯಕ್ತಿಕ 400 ಮೀಟರ್ ನಲ್ಲಿಕಂಚನ್ನೂ ತಮ್ಮದಾಗಿಸಿಕೊಂಡಿದ್ದರು. 2018ರ ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲೂಮಹಿಳೆಯರ 4400 ಮೀ. ರಿಲೇ ಚಿನ್ನದ ತಂಡದಲ್ಲಿದ್ದರು. ಮಿಶ್ರ ರಿಲೇಯಲ್ಲೂಅವರು ಭಾರತಕ್ಕೆ ಪ್ರಮುಖ ಪದಕ ತಂದುಕೊಟ್ಟಿದ್ದಾರೆ. ಒಲಿಂಪಿಕ್ಸ್ ನಲ್ಲೂಭಾರತವನ್ನು ಪ್ರತಿನಿಧಿಸಿರುವ ಪೂವಮ್ಮ ಅವರಿಗೆ 2015ರಲ್ಲಿಕೇಂದ್ರ ಸರಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. ವೇಗ ಮತ್ತು ತಾಳ್ಮೆ ಎರಡೂ ಜೀವಾಳವಾಗಿರುವ 400 ಮೀಟರ್ ರಿಲೇಯಲ್ಲಿ36ರ ಹರೆಯದಲ್ಲೂಏಷ್ಯಾದ ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸಿ ಚಿನ್ನ ಗೆಲ್ಲುವುದು ಸಾಮಾನ್ಯ ಸಾಧನೆಯಲ್ಲ. ಹೊಸ ತಲೆಮಾರಿನ ಓಟಗಾರ್ತಿಯರ ಜತೆ ಹೆಜ್ಜೆ ಹಾಕುತ್ತ ಭಾರತದ ತ್ರಿವರ್ಣ ಧ್ವಜವನ್ನು ಮತ್ತೊಮ್ಮೆ ಹಾರಿಸಿದ ಪೂವಮ್ಮ, ಕೊಡಗು ಮಾತ್ರವಲ್ಲ, ಕರ್ನಾಟಕದ ಕ್ರೀಡಾ ಹೆಮ್ಮೆಯಾಗಿ ಮತ್ತೆ ಹೊರಹೊಮ್ಮಿದ್ದಾರೆ.